Kannada

ಡಾ. ಉದಯ್ ಬಿ. ಗರುಡಾಚಾರ್ ರವರ ಸಂಕ್ಷಿಪ್ತ ವ್ಯಕ್ತಿಚಿತ್ರ

ನಿವೃತ್ತ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಶ್ರೀ ಬಿ.ಎನ್.ಗರುಡಾಚಾರ್, ಐ.ಪಿ.ಎಸ್ (ರಿ) ಮತ್ತು ಶ್ರೀಮತಿ. ವತ್ಸಲಾ ರವರಿಗೆ ಜನಿಸಿದ ಡಾ. ಉದಯ್ ಬಿ.ಗರುಡಾಚಾರ್ ರವರು ತಮ್ಮ ಶಾಲಾ ದಿನಗಳನ್ನು, ಬೆಂಗಳೂರು, ಶಿವಮೊಗ್ಗ, ಗುಲ್ಬರ್ಗ ಮತು ಬೆಳಗಾಂ ನಲ್ಲಿ ಕಳೆದರು. ಅವರು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಬಿ.ಇ. ಪದವಿಯನ್ನು ಪಡೆದರು. ಡಾ.ಉದಯ್ ರವರಿಗೆ ಮೊದಲಿನಿಂದಲೂ ತಾವೊಬ್ಬ ಉದ್ಯಮಿ ಆಗ ಬೇಕೆಂದು ಬಯಸಿದ್ದು, ಆದರೆ ಆರ್ಥಿಕ ನಿರ್ಬಂಧ ಎದುರಿಸುತ್ತಿದ್ದರು. ಅವರ ಚಿಕ್ಕಪ್ಪ ಶ್ರೀ ಶೇಷಾದ್ರಿ ಯವರು ಉದ್ಯಮಿಯಾಗಿದ್ದು, ಡಾ.ಉದಯ್ ರವರ ಬಗ್ಗೆ ವಿಶೇಷ ಆಸಕ್ತಿ ಹೊಂದಿ, ಅವರಿಗೆ ಮೊದಲು ಒಬ್ಬ ಸೇಲ್ಸ್‍ಮೆನ್ ಆಗುವಂತೆ ಸೂಚಿಸಿದರು. ಅವರು ಮೊದಲಿಗೆ ಟೈರ್ ಮತ್ತು ಅದರ ಇತರ ಉತ್ಪನ್ನಗಳಿಗೆ ಮಾರ್ಕರ್ಸ್ ಗಳನ್ನು ಮಾರಾಟಮಾಡುವ ಉದ್ಯೋಗವನ್ನು ಆರಂಭಿಸಿದರು. ನಂತರ ಅವರು ಉಮಯಾ ನಿಟ್ಟಿಂಗ್ ಕಾರ್ಪೋರೇಷನ್ (ತಿರುಪೂರ್) ರವರ ಹೊಸೈರಿ ಯನ್ನು ಮಾರಾಟ ಮಾಡಲು ಪ್ರಾರಂಭಿಸಿದರು ಮತ್ತು ಒಂದು ಸಣ್ಣ ಜಾಹೀರಾತು ಸಂಸ್ಥೆಯನ್ನು ಪ್ರಾರಂಭಿಸಿದರು. ಅವರು ಗ್ರಾನೈಟ್ ಉದ್ಯಮ ಮತ್ತು ಚರ್ಮದ ಉತ್ಪನ್ನಗಳನ್ನು ತಯಾರಿಸುವಲ್ಲಿಯೂ ಕೆಲಸ ಮಾಡಿದರು.
1992ರಲ್ಲಿ ಅವರು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರವೇಶಿಸಿ, 2002 ರ ವೇಳೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಅಭಿವೃದ್ಧಿ ಪಡಿಸಿ, ಸೈಟ್‍ಗಳನ್ನಾಗಿ ಪರವರ್ತಿಸಿ ಮಾರಾಟ ಮಾಡಿದರು. 2003 ರಲ್ಲಿ ಅವರಿಗೆ ಬೆಂಗಳೂರಿನ ಮಗ್ರಾತ್ ರಸ್ತೆಯಲ್ಲಿ ಮೊದಲ ಶಾಪಿಂಗ್ ಮಾಲ್‍ಗಳಲ್ಲಿ ಒಂದನ್ನು ನಿರ್ಮಿಸುವ ಅವಕಾಶ ದೊರೆಯಿತು. 2005ರಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಿದ ಯೋಜನಗೆಗಳಲ್ಲಿ ಒಂದಾದ ಗರುಡಾ ಮಾಲ್ ಅನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಯಿತು. ಮುಂದಿನ ಶಾಪಿಂಗ್ ಮಾಲ್ “ಗರುಡಾ ಸ್ವಾಗತ್” ಅನ್ನು ಜಯನಗರದಲ್ಲಿ ಅಭಿವೃದ್ಧಿಪಡಿಸಲಾಯಿತು. ಅದಾದನಂತರ ಮೈಸೂರು ಮಹಾ ನಗರಪಾಲಿಕೆಯೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ‘ಗರುಡಾ ಮಾಲ್, ಮೈಸೂರು’ ಶಾಪಿಂಗ್ ಮಾಲ್ ಅನ್ನು ನಿರ್ಮಿಸಲಾಯಿತು.
ಈ ಮಧ್ಯೆ ಅನೇಕ ಲೇಔಟ್ ಗಳನ್ನು ಅಭಿವೃದ್ಧಿಪಡಿಸಲಾಯಿತು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ನಿರ್ಮಿಸಲು, ಸ್ಪಾನಿಷ್ ಕಂಪೆನಿಯ ಸಹಯೋಗದೊಂದಿಗೆ ಒಂದು ನಿರ್ಮಾಣ ಕಂಪೆನಿಯನ್ನು ಪ್ರಾರಂಭಿಸಲಾಯಿತು. ಈ ಕಂಪೆನಿಯ ಮೂಲಕ ಸಾಕಷ್ಟು ಮನೆಗಳನ್ನು ಖಾಸಿಗಯವರಿಗಲ್ಲದೆ, ಸರ್ಕಾರದ ಯೋಜನೆಗಳಿಗೂ ನಿರ್ಮಿಸಲಾಯಿತು. 2012ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನ ಕೋರಮಂಗಲದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 1512 ಮನೆಗಳನ್ನು ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಸಾರ್ವಜನಿಕ-ಖಾಶಗಿ ಸಹಭಾಗಿತ್ವದ ಗುತ್ತಿಗೆಯನ್ನು ಗರುಡಾ ಗ್ರೂಪ್ ಗೆ ನೀಡಿತು. ಈ ಯೋಜನೆಯು ಪ್ರಗತಿಯಲ್ಲಿದ್ದು 2020 ರ ಮಧ್ಯಬಾಗದ ವೇಳೆಗೆ ಸಾರ್ವಜನಿಕರ ಉಪಯೋಗಕ್ಕೆ ಸಮರ್ಪಿಸಲಾಗುವುದು. ಗರುಡಾ ಗ್ರೂಪ್‍ನ ಉದ್ದೇಶವು “ಕರ್ಮ ಪರಮೋ ಧರ್ಮ” ಎಂಬುದಾಗಿದೆ. ಸಾವಿರಾರು ಮನೆಗಳನ್ನು ಕರ್ನಾಟಕ ಸರ್ಕಾರ ಹಾಗೂ ಖಾಸಿಗಿಯವರಿಗಾಗಿ ನಿರ್ಮಾಣ ಮಾಡಲಾಗುತ್ತಿದೆ.

ಡಾ.ಉದಯ್ ಗರುಡಾಚಾರ್ ರವರು ಉದ್ಯಮ, ಸಾಮಾಜಿಕ ಸೇವೆ, ಆರ್ಥಿಕವಾಗಿ ಹಿಂದುಳಿದವರಿಗಾಗಿ ಮನೆಗಳ ನಿರ್ಮಾಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಎರಡು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟೋರೇಟ್ ಪದವಿಯನ್ನು ನೀಡಿವೆ.
ಡಾ.ಉದಯ್ ಗರುಡಾಚಾರ್ ರವರು ಭಾರತೀಯ ಜನತಾ ಪಕ್ಷದ ಸಕ್ರಿಯ ಸದಸ್ಯರಾಗಿದ್ದಾರೆ. ಅವರು 2013 ರಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಿಧಾನಸಭಾ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಸ್ವಲ್ಪದರಲ್ಲಿ ಸೋತಿದ್ದರು. ಅವರು 2018 ರಲ್ಲಿ ಗೆಲವು ಸಾದಿಸಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ.
ಅವರ ಧರ್ಮಪತ್ನಿ ಶ್ರೀಮತಿ. ಮೇಧಿನಿ ಉದಯ್ ರವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಫಿಸಿಕ್ಸ್ ವಿಭಾಗದಿಂದ ಎಂ.ಎಸ್ಸಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ಅವರು ಗರುಡಾ ಗ್ರೂಪ್‍ನ ನಿರ್ದೇಶಕಿಯಾಗಿ, ಗರುಡಾ ಮಾಲ್‍ಗಳಲ್ಲಿ ಆಯೋಜಿಸುವ ಮನರಂಜನೆ, ಸಾಂಸ್ಕøತಿಕ ಮತ್ತಿತರ ಚಟುವಟಿಕೆಗಳಲ್ಲಿ ನೆರವಾಗುತ್ತಿದ್ದಾರೆ.
ಅವರ ಮಗಳಾದ ಶ್ರೀಮತಿ. ಪ್ರೇರಣಾ ರವರು ಮಾರ್ಕೆಟಿಂಗ್ ಮತ್ತು ಫ್ಯನಾನ್ಸ್ ವಿಭಾಗದಲ್ಲಿ ಎಂ.ಬಿ.ಎ. ಪದವೀಧರೆಯಾಗಿದ್ದು, ಗರುಡಾ ಗ್ರೂಪ್‍ನ ಮಾರ್ಕೆಟಿಂಗ್ ವಿಭಾಗದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅವರ ಮಗನಾದ ಶ್ರೀ. ಪ್ರಣವ್ ರವರು ಮಾರ್ಕೆಟಿಂಗ್ ಮತ್ತು ಹೆಚ್.ಆರ್ ವಿಭಾಗದಲ್ಲಿ ಎಂ.ಬಿ.ಎ. ಪದವೀಧರನಾಗಿದ್ದು, ಹಾರ್ವಡ್ ಯೂನಿವರ್ಸಿಟಿಯಿಂದ ಬಿಸಿನೆಸ್ ಲೀಡರ್‍ಶಿಪ್ ನಲ್ಲಿ ಫೆಲೋಶಿಪ್ ಪಡೆದಿರುತ್ತಾರೆ. ಶ್ರೀ ಪ್ರಣವ್ ರವರು ಗರುಡಾ ಗ್ರೂಪ್‍ನ ನಿರ್ಮಾಣ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ಚಟುವಟಿಕೆಗಳು: ಡಾ.ಉದಯ್ ಗರುಡಾಚಾರ್ ರವರು ಅನೇಕ ಉಚಿತ ಆರೋಗ್ಯ ಮತ್ತು ಕಣ್ಣಿನ ಚಿಕಿತ್ಸೆಯ ಶಿಬಿರಗಳನ್ನು ಆಯೋಜಿಸಿದ್ದಾರೆ. ಅವರಿಗೆ ಕ್ರೀಡೆಗಳಲ್ಲಿ ವಿಶೇಷ ಆಸಕ್ತಿ ಇದ್ದು, ಬ್ಯಾಡ್ಮಿಂಟನ್, ಟೆನಿಸ್, ಕ್ರಿಕೆಟ್ ಮತ್ತು ಜಿಮ್ನಾಷಿಯಂ ಗಳಲ್ಲಿ ಸ್ಪರ್ದೆಗಳನ್ನು ಆಯೋಜಿಸಿದ್ದಾರೆ. ಅವರು ಅನೇಕ ಬಡ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಮತ್ತು ದಲಿತ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ನೆರವಾಗಿದ್ದಾರೆ.